ನವೋದಯ ಪ್ರವೇಶ ಪರೀಕ್ಷೆ 2025-26 ನೇ ಶೈಕ್ಷಣಿಕ ಸಾಲಿಗೆ ಅರ್ಜಿ ಹಾಕಲು ಪಾಲಿಸಬೇಕಾದ ಹೊಸ ನಿಯಮಗಳು:
ನವೋದಯ ಹೊಸ ನಿಯಮಗಳು 1: ನವೋದಯ ವಿದ್ಯಾಲಯಕ್ಕೆ ಅರ್ಜಿ ಹಾಕಲು ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಓದುತ್ತಿರಬೇಕು.
ನವೋದಯ ಹೊಸ ನಿಯಮಗಳು 2: ವಿದ್ಯಾರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಸರ್ಕಾರದಿಂದ ನಡೆಸುವ ಶಾಲೆಗಳಲ್ಲಿ ಓದುತ್ತಿರಬೇಕು.
ನವೋದಯ ಹೊಸ ನಿಯಮಗಳು 3: ವಿದ್ಯಾರ್ಥಿಗಳು 3ನೆಯ, 4ನೆಯ ಮತ್ತು 5ನೇ ತರಗತಿಗಳನ್ನು ಒಂದೇ ಜಿಲ್ಲೆಯಲ್ಲಿ ಓದಿರಬೇಕು ಇದು ನವೋದಯದ ಕಡ್ಡಾಯವಾದ ನಿಯಮ.
ನವೋದಯ ಹೊಸ ನಿಯಮಗಳು 4: ನವೋದಯಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಯಾವ ಜಿಲ್ಲೆಯಲ್ಲಿ ಓದುತ್ತಿರುತ್ತಾರೆ ಅದೇ ಜಿಲ್ಲೆಯಲ್ಲಿ ಮಗುವಿನ ಆಧಾರ್ ಕಾರ್ಡ್ ಮತ್ತು ತಂದೆಯ ಆಧಾರ್ ಕಾರ್ಡ್ ಹೊಂದಿರಬೇಕು ಇದು ಕಡ್ಡಾಯವಾದ ನಿಯಮವಾಗಿದೆ.
ನವೋದಯ ಹೊಸ ನಿಯಮಗಳು 5: ವಿದ್ಯಾರ್ಥಿಗಳು 3ನೇ ತರಗತಿ 4ನೇ ತರಗತಿ ಮತ್ತು 5ನೇ ತರಗತಿಗಳನ್ನು ಯಾವುದೇ ಹಿಂಬಡ್ತಿ ಪಡೆಯದೆ ಕ್ರಮವಾಗಿ ಓದಿರಬೇಕು.
ನವೋದಯ ಹೊಸ ನಿಯಮಗಳು 6: ನವೋದಯ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಲು ಒಂದೇ ಒಂದು ಸಲ ಮಾತ್ರ ಅವಕಾಶ, ಎರಡನೇ ಸಲ ಅವಕಾಶವಿರುವುದಿಲ್ಲ.
ನವೋದಯ ಹೊಸ ನಿಯಮಗಳು 7: ವಿದ್ಯಾರ್ಥಿಯು OBC, SC ಮತ್ತು ST ಪಂಗಡಕ್ಕೆ ಸೇರಿದರೆ ಅದು ಕೇಂದ್ರ ಸರ್ಕಾರದ ಗೆಜೆಟ್ಟಿನಲ್ಲಿ ಆ ಜಾತಿ ಸೇರ್ಪಡೆ ಆಗಿರಬೇಕು ಆಗ ಮಾತ್ರ ಮೀಸಲಾತಿ ದೊರೆಯುತ್ತದೆ.
ನವೋದಯ ಹೊಸ ನಿಯಮಗಳು 8: ನವೋದಯ ಅರ್ಜಿಯನ್ನು ಆನ್ಲೈನ್ ಮುಖಾಂತರ ಹಾಕುವಾಗ ವಿದ್ಯಾರ್ಥಿಯ ಆಧಾರ್ಕಾಡಿಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆ ಆಕ್ಟಿವ್ ಆಗಿರಬೇಕು, ಏಕೆಂದರೆ ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಆ OTP ಯ ಸಂಖ್ಯೆಯನ್ನು ಭರ್ತಿ ಮಾಡಿದ ನಂತರ ಅಪ್ಲಿಕೇಶನ್ ತುಂಬಲು ಪ್ರಾರಂಭವಾಗುತ್ತದೆ.
ನವೋದಯ ಹೊಸ ನಿಯಮಗಳು 9: ನವೋದಯದ ಹೊಸ ನಿಯಮದ ಪ್ರಕಾರ ತಂದೆಯ ಯಾವ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಇರುತ್ತದೆ ಆ ಜಿಲ್ಲೆಯಲ್ಲಿ ತಂದೆಯ ನಿವೇಶನ ಪತ್ರ, ಮತ ಪತ್ರ, ರೇಷನ್ ಕಾರ್ಡ್, ವಿದ್ಯುತ್ ಬಿಲ್, ನಳದ ಬಿಲ್ ಇತರ ದಾಖಲೆಗಳನ್ನು ಹೊಂದಿರಬೇಕು ಆಗ ಮಾತ್ರ ಪ್ರವೇಶ ಪರೀಕ್ಷೆಯಲ್ಲಿ ತರಗತಿಯಾದರು ಈ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದರೆ ಪ್ರವೇಶವನ್ನು ತಿರಸ್ಕರಿಸಲಾಗುವುದು.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ನವೋದಯದ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ : ಈ ಕೆಳಗಿನ ವಿಡಿಯೋದಲ್ಲಿ ನವೋದಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.