ಸೈನಿಕ್ ಶಾಲೆಗೆ ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಹೊಂದಿರಬೇಕು, ಯಾವ ಮಾನದಂಡನೆಯನ್ನು ಪಾಲನೆ ಮಾಡಬೇಕಾಗುತ್ತದೆ, ಯಾವ ಜನ್ಮ ದಿನಾಂಕ ಹೊಂದಿರಬೇಕು?
ಸೈನಿಕ್ ಶಾಲೆಗೆ 2025-26 ನೇ ಶೈಕ್ಷಣಿಕ ಸಾಲಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಯಾವುವು?
1) ಸೈನಿಕ್ ಶಾಲೆಗೆ 2025- 26ನೇ ಶೈಕ್ಷಣಿಕ ಶಾಲೆಗೆ ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಗಳು 2024-25 ನೇ ಶೈಕ್ಷಣಿಕ ಸಾಲಿನಲ್ಲಿ 5ನೇ ತರಗತಿ ಅಥವಾ 5ನೇ ತರಗತಿಯನ್ನು ಪಾಸಾಗಿರಬೇಕು.
2) ಸೈನಿಕ್ ಶಾಲೆಗೆ 2025-26ನೇ ಶೈಕ್ಷಣಿಕ ಸಾಲಿಗಾಗಿ ಅರ್ಜಿಯನ್ನು ಸಲ್ಲಿಸಲು ಬಾಲಕ ಬಾಲಕಿಯರು ಯಾರು ಕರ್ನಾಟಕದ ನಿವೇಶವನ್ನು ಹೊಂದಿರುತ್ತಾರೆ, ಅವರಿಗೆ 70% ಮೀಸಲಾತಿ ದೊರೆಯುತ್ತದೆ.
3) ಸೈನಿಕ್ ಶಾಲೆ 2025 26 ನೇ ಶೈಕ್ಷಣಿಕ ಸಾಲಿಗೆ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಜನ್ಮ ಪ್ರಮಾಣ ಪತ್ರವನ್ನು ಹೊಂದಿರಬೇಕು ,ಇದು ಕಡ್ಡಾಯವಾಗಿ ಬೇಕಾಗಿರುವ ಪ್ರಮಾಣ ಪತ್ರವಾಗಿರುತ್ತದೆ ಏಕೆಂದರೆ ಇದನ್ನು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಬೇಕಾಗುತ್ತದೆ.
4) ಸೈನಿಕ್ ಶಾಲೆಗೆ 2025 26ನೇ ಶೈಕ್ಷಣಿಕ ಸಾಲಿಗಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು SC , ST ಅಥವಾ OBC ಪಂಗಡಕ್ಕೆ ಸೇರಿದರೆ ಅವರು ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣ ಪತ್ರವನ್ನು ತರಬೇಕು. (ಕಡ್ಡಾಯವಾಗಿ ಆ ಜಾತಿಯು ಕೇಂದ್ರ ಸರ್ಕಾರದ ಗೆಜೆಟಿನಲ್ಲಿ ಸೇರ್ಪಡೆ ಹೊಂದಿರಬೇಕು)
ಸೈನಿಕ್ ಶಾಲೆಗೆ ಅರ್ಜಿ ಸಲ್ಲಿಸಲು ಯಾವ ಜನ್ಮ ದಿನಾಂಕವನ್ನು ಹೊಂದಿರಬೇಕು?
ಸೈನಿಕ್ ಶಾಲೆ 2025 26ನೇ 6ನೇ ತರಗತಿ ಶೈಕ್ಷಣಿಕ ಸಾಲಿಗೆ ಅರ್ಜಿಯನ್ನು ಸಲ್ಲಿಸಲು ಬಾಲಕ ಮತ್ತು ಬಾಲಕಿಯರಿಗೆ 10 ರಿಂದ 12 ವಯೋಮಿತಿಯನ್ನು ಹೊಂದಿರಬೇಕು.
ಸೈನಿಕ ಶಾಲೆಗೆ ಅರ್ಜಿ ಸಲ್ಲಿಸಲು 5 ನೇ ತರಗತಿ ಅಥವಾ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಹೊಂದಿರಬೇಕಾದ ಜನ್ಮ ದಿನಾಂಕ: 01-04-2013 ರಿಂದ 31-03-2015 ರ ಮಧ್ಯೆ ಜನಿಸಿರಬೇಕು.
ಸೈನಿಕ್ ಶಾಲೆ 2025 26ನೇ 9ನೇ ತರಗತಿ ಶೈಕ್ಷಣಿಕ ಸಾಲಿಗೆ ಅರ್ಜಿಯನ್ನು ಸಲ್ಲಿಸಲು ಬಾಲಕ ಮತ್ತು ಬಾಲಕಿಯರಿಗೆ 13 ರಿಂದ 15 ವಯೋಮಿತಿಯನ್ನು ಹೊಂದಿರಬೇಕು.
ಸೈನಿಕ ಶಾಲೆಗೆ ಅರ್ಜಿ ಸಲ್ಲಿಸಲು 8ನೇ ತರಗತಿ ವಿದ್ಯಾರ್ಥಿಗಳು ಹೊಂದಿರಬೇಕಾದ ಜನ್ಮ ದಿನಾಂಕ: 01-04-2010 ರಿಂದ 31-03-2012 ರ ಮಧ್ಯೆ ಜನಿಸಿರಬೇಕು.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಸೈನಿಕ್ ಶಾಲೆ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ :
ಸೈನಿಕ್ ಶಾಲೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :