ಮುರಾರ್ಜಿ ದೇಸಾಯಿ ವಸತಿ ಶಾಲೆ 2025 ಪ್ರವೇಶ ಪರೀಕ್ಷೆಯ ಫಲಿತಾಂಶ , ಅರ್ಹತೆ ಮತ್ತು ಪಾಲಕರ ಆದಾಯ. ವಿಶೇಷ ವರ್ಗದಲ್ಲಿ ಬರುವ ಪಂಗಡಗಳು, ಒಂದನೇ ಪಟ್ಟಿಯಲ್ಲಿ ಬರುವ ಪಂಗಡಗಳು,
ಮುರಾರ್ಜಿ ದೇಸಾಯಿ 2025 ಫಲಿತಾಂಶ ಹಂತಗಳ ವಿಶೇಷ ವರ್ಗದ ಪಟ್ಟಿ ಅಡಿಯಲ್ಲಿ ಯಾವ ಪಂಗಡಗಳು ಬರುತ್ತವೆ?
– ವಿಶೇಷ ವರ್ಗದಡಿ ಅಲೆಮಾರಿ/ಅರೆ ಅಲೆಮಾರಿ, ಸಫಾಯಿ ಕರ್ಮಚಾರಿಗಳ ಮಕ್ಕಳು, ದೇವದಾಸಿ ಮಕ್ಕಳು ಪೌರಕಾರ್ಮಿಕ ಮಕ್ಕಳು, ಸ್ಮಶಾನ ಕಾರ್ಮಿಕರ ಮಕ್ಕಳು, ಚಿಂದಿ ಆಯುವವರ ಮಕ್ಕಳು, ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಮಕ್ಕಳು ಮತ್ತು ಮೊಮ್ಮಕ್ಕಳು, ಆಶ್ರಮ ಶಾಲೆಯ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರವಾಗಿ ಪ್ರವೇಶಾತಿ ನೀಡಲಾಗುವುದು. ಈ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು.
* ದಿವ್ಯಾಂಗ ಮಕ್ಕಳು (Specially Abled Children), ಮಾಜಿ ಸೈನಿಕರ ಮಕ್ಕಳು ಮತ್ತು ವಿಶೇಷ ದುರ್ಬಲ ವರ್ಗದವರಿಗೆ (ಹೆಚ್‌ಐವಿ ಪೀಡಿತರು / ತಂದೆ ಅಥವಾ ತಾಯಿ ಇಲ್ಲದ (ಏಕ ಪೋಷಕರ ಮಕ್ಕಳು) / ಅನಾಥ ಮತ್ತು ಬಾಲ ಕಾರ್ಮಿಕರ ಮಕ್ಕಳು ಹಾಗೂ ಯೋಜನಾ ನಿರಾಶ್ರಿತರು) ಈ ಎಲ್ಲಾ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪರೀಕ್ಷೆಗೆ ಹಾಜರಾಗಿರಬೇಕು.
ಮುರಾರ್ಜಿ ದೇಸಾಯಿ 2025 ಒಂದನೇ ಪಟ್ಟಿ ಫಲಿತಾಂಶದಲ್ಲಿ ಯಾವ ಪಂಗಡಗಳು ಸೇರ್ಪಡೆ ಆಗಿರುತ್ತವೆ?
ಮುರಾರ್ಜಿ ದೇಸಾಯಿ 2025 ಒಂದನೇ ಪಟ್ಟಿ ಫಲಿತಾಂಶದಲ್ಲಿ ಸೇರ್ಪಡೆ ಆಗಿರುವ ಪಂಗಡಗಳು:
ಪ.ಜಾತಿ / ಪರಿಶಿಷ್ಟ ವರ್ಗ
ಹಿಂ.ವರ್ಗದ ಪ್ರವರ್ಗ-1
ಹಿಂ.ವರ್ಗ 2ಎ, 2ಬಿ, 3ಎ ಮತ್ತು 3ಬಿ
ಮುರಾರ್ಜಿ ದೇಸಾಯಿ ಅರ್ಜಿ 2025 ರ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಪಾಲಕರ ಆದಾಯದ ಮಿತಿ ಎಷ್ಟಿರಬೇಕು?
ಮುರಾರ್ಜಿ ದೇಸಾಯಿ 2025 ಒಂದನೇ ಪಟ್ಟಿ ಫಲಿತಾಂಶದಲ್ಲಿ ಸೇರ್ಪಡೆ ಆಗಿರುವ ಪಂಗಡಗಳು:
ಪ.ಜಾತಿ / ಪರಿಶಿಷ್ಟ ವರ್ಗ – ₹2,50,000/-
ಹಿಂ.ವರ್ಗದ ಪ್ರವರ್ಗ-1 – ₹2,50,000/-
ಹಿಂ.ವರ್ಗ 2ಎ, 2ಬಿ, 3ಎ ಮತ್ತು 3ಬಿ – ₹1,00,000/-
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ :
ಮುರಾರ್ಜಿ ದೇಸಾಯಿ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :